Posts

Showing posts from December, 2022

ಕನ್ನಡ ನಾಡು ಗಂಧದ ಬೀಡು. ಕನ್ನಡ ಉಳಿಸಿ ಗಂಧದ ಗಿಡ ಬೆಳೆಸಿ.

Image
  ಕನ್ನಡ ನಾಡು ಗಂಧದ ಬೀಡು. ಕನ್ನಡ ಉಳಿಸಿ ಗಂಧದ ಗಿಡ ಬೆಳೆಸಿ. ಚಂದ್ರಶೇಖರ .ಆರ್ .ಎಸ್  - ಬಿ . ಇ , ಎಂ . ಬಿ . ಎ ಕನ್ನಡ ಮತ್ತು ಪರಿಸರ ಪ್ರೇಮಿ , ರಾಜ್ಯ ಪ್ರಶಸ್ತಿ ವಿಜೇತರು ,  ಪುನೀತ ಪರ್ವ ಪ್ರಶಸ್ತಿ , ಕನ್ನಡ ಕಣ್ಮಣಿ ಪ್ರಶಸ್ತಿ ಪುರಸ್ಕೃತರು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಸನ್ಮಾನಿತರು .   ಶ್ರೀ ಚಂದ್ರಶೇಖರ್ ರವರು ಎಂ . ಎನ್ . ಸಿ ಕಂಪನಿಯಲ್ಲಿ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಆಗಿದ್ದು ಸಾಹಿತ್ಯಾಸಕ್ತಿಯನ್ನು ಹಾಗೂ ಪರಿಸರ ಪ್ರೇಮವನ್ನು ಬೆಳೆಸಿಕೊಂಡಿದ್ದಾರೆ.   ಇಂಜಿನಿಯರಿಂಗ್ ಮತ್ತು ಎಂ . ಬಿ . ಎ ಪದವಿಯನ್ನು ಪಡೆದಿರುವ ಇವರು ಹಲವಾರು ಪುಸ್ತಕಗಳನ್ನು ಹಾಗೂ ಕವನಗಳನ್ನು ರಚಿಸಿದ್ದಾರೆ. ಇವರು ಎಂಟು ವರ್ಷಗಳ ಕಾಲ ಅಮೆರಿಕ ಮತ್ತು ಜರ್ಮನಿಯಲ್ಲಿ ಕೆಲಸ ಮಾಡಿದ್ದಾರೆ ಹಾಗೂ ಹೊರದೇಶದಲ್ಲಿ ಕನ್ನಡದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಕನ್ನಡ ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಹೋರಾಡುತ್ತಿದ್ದಾರೆ.   ಇವರ ಡಿಜಿಟಲೀಕರಣದ ಸಂಶೋಧನೆಗಳಿಗಾಗಿ 2013 ಹಾಗೂ 2014 ರಲ್ಲಿ ವರ್ಷದ ಸಂಶೋಧಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರಿಗೆ ಅನೇಕ ಪೇಟೆಂಟ್ ಗಳು ದೊರೆತಿವೆ. ಇವರ ಸಂಶೋಧನೆಗಳನ್ನು ಗುರುತಿಸಿ ಡಾ . ಎಪಿಜೆ ಅಬ್ದುಲ್ ಕಲಾಂ ಆವಿಷ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ .   ಕನ್ನಡ ಹಾಗೂ ಪರಿಸರದ ಮೇಲೆ ಅಪಾರ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿರುವ ಇವರು ಕನ್ನಡ ...