ಕನ್ನಡ ರಾಜ್ಯೋತ್ಸವ
ಕನ್ನಡ ರಾಜ್ಯೋತ್ಸವ
ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜಾದಿನವೆಂದು ಪಟ್ಟಿ ಮಾಡಲಾಗಿದೆ ಮತ್ತು ವಿಶ್ವದಾದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕರ್ನಾಟಕದ ಉದಯ
ಭಾರತದ ಸ್ವಾತಂತ್ರ್ಯದ ನಂತರ ಮೈಸೂರು ಸಂಸ್ಥಾನ ಭಾರತದ ಒಕ್ಕೂಟವನ್ನು ಸೇರಿತು. ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ "ರಾಜಪ್ರಮುಖ"ರಾದರು. ಒಡೆಯರ ಮನೆತನಕ್ಕೆ ಭಾರತ ಸರ್ಕಾರದಿಂದ ಗೌರವಧನ ೧೯೭೫ರ ವರೆಗೆ ಸಂದಾಯವಾಗುತ್ತಿತ್ತು. ಈ ಮನೆತನದ ಸದಸ್ಯರು ಈಗಲೂ ಮೈಸೂರು ಅರಮನೆಯ ಒಂದು ಭಾಗದಲ್ಲಿ ಇದ್ದಾರೆ.
ಏಕೀಕರಣ ಚಳವಳಿಯ ಬಹುಕಾಲದ ಬೇಡಿಕೆಯ ಮೇರೆಗೆ ನವೆಂಬರ್ ೧, ೧೯೫೬ ರಂದು ರಾಜ್ಯ ಪುನಸ್ಸಂಘಟನಾ ಕಾಯಿದೆಗೆ ಅನುಸಾರವಾಗಿ ಮೈಸೂರು ರಾಜ್ಯಕ್ಕೆ ಕೊಡಗು ರಾಜ್ಯ ಹಾಗೂ ಸುತ್ತಲ ಮದರಾಸು, ಹೈದರಾಬಾದ್, ಮತ್ತು ಬಾಂಬೆ ರಾಜ್ಯಗಳ ಕನ್ನಡ-ಪ್ರಧಾನ ಪ್ರದೇಶಗಳು ಸೇರಿ ಏಕೀಕೃತ "ವಿಶಾಲ ಮೈಸೂರು" ಅಸ್ತಿತ್ವಕ್ಕೆ ಬಂದಿತು (ಬಳ್ಳಾರಿ ಜಿಲ್ಲೆ ೧೯೫೩ರಲ್ಲಾಗಲೆ ರಾಜ್ಯಕ್ಕೆ ಸೇರಿತ್ತು). ನವೆಂಬರ್ ೧, ೧೯೭೩ ರಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು.
ಐತಿಹಾಸಿಕ ಸ್ಥಳಗಳು
ಬಾದಾಮಿ, ಐಹೊಳೆ, ಪಟ್ಟದಕಲ್ಲು
ಹಾಸನ ಜಿಲ್ಲೆಯಲ್ಲಿ ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಸಕಲೇಶಪುರ
ಸಾಗರ(ವರದಹಳ್ಳಿ,ಇಕ್ಕೇರಿ,ಕೆಳದಿ,ಸಿಗಂದೂರು,ಮಾರಿಕಾಂಬಾ ದೇವಸ್ಥಾನ ಸಾಗರ)
ಹಂಪೆ, ವಿಜಯಪುರ, ಮೈಸೂರು, ಮಂಡ್ಯಜಿಲ್ಲೆಯಲ್ಲಿ ಶ್ರೀರಂಗಪಟ್ಟಣ, ಮೇಲುಕೋಟೆ, ಶಿವನ ಸಮುದ್ರ, ಆದಿ ಚುಂಚನಗಿರಿ, ಶಿರಡಿ ಸಾಯಿಬಾಬಾ ಮಂದಿರ, ಕೆರೆಸಂತೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಚಿತ್ರದುರ್ಗ, ಭದ್ರಾವತಿ, ಬೀದರ್
ಮಾಕಿರೆಡ್ಡೀಪಲ್ಲಿc, ಬನವಾಸಿ, ಮಾನ್ಯಪುರ, ಉಡುಪಿಜಿಲ್ಲೆಯಲ್ಲಿ ಅಷ್ಟಮಠಗಳು, ಮಣಿಪಾಲ, ದಕ್ಷಿಣ ಕನ್ನಡಯಲ್ಲಿ ಧರ್ಮಸ್ಥಳ, ಕಟೀಲು, ಉಳ್ಳಾಲ, ಕೊಡಗುಜಿಲ್ಲೆಯಲ್ಲಿ ರಾಜಾಸೀಟ್, ಭಾಗಮಂಡಲ, ಬೆಂಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ
ಸಂಸ್ಕೃತಿ
ಕರ್ನಾಟಕದ ಕೆಲವು ಜನಪ್ರಿಯ ಸಾಂಸ್ಕೃತಿಕ ಕಲೆಗಳು:
ಸಂಗೀತ: ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ ಪದ್ಧತಿಯಾದ ಕರ್ನಾಟಕ ಸಂಗೀತ ಉಗಮವಾದದ್ದು ಕರ್ನಾಟಕದಲ್ಲಿಯೇ. ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಇತರ ಸಂಗೀತ ರೂಪಗಳಲ್ಲಿ ಭಾವಗೀತೆಗಳು, ಸುಗಮ ಸಂಗೀತ, ಚಿತ್ರಗೀತೆಗಳು ಸೇರಿವೆ.
ನೃತ್ಯ: ಭಾರತದ ಶಾಸ್ತ್ರೀಯ ನೃತ್ಯ ಪದ್ಧತಿಗಳಲ್ಲಿ ಹೆಸರಾದ ಭರತನಾಟ್ಯ ಕರ್ನಾಟಕದಲ್ಲಿ ಜನಪ್ರಿಯ. ಕರ್ನಾಟಕಕ್ಕೆ ವಿಶಿಷ್ಟವಾದ ಒಂದು ನೃತ್ಯಕಲೆ ಯಕ್ಷಗಾನ. ಡೊಳ್ಳು ಕುಣಿತ ಜಾನಪದ ನೃತ್ಯ ಪದ್ಧತಿಗಳಲ್ಲಿ ಒಂದು.
ಸಂಸ್ಕೃತಿಯ ಕೇಂದ್ರವಾದ ಕರ್ನಾಟಕ, ಮೈಸೂರು, ಹಳೇಬೀಡು, ಬೇಲೂರು ಮುಂತಾದ ರಮಣೀಯ ತಾಣಗಳಿಗೆ ಮನೆಯಾಗಿದೆ.
ಕಲೆ
ಬಿದರಿ ಕಲೆ ಸುಮಾರು ೧೪ನೆ ಶತಮಾನ್ ದಲ್ಲಿ ಬೀದರ್ ಜಿಲ್ಲೆಯಲ್ಲಿ ಜನಿಸಿದ ಪ್ರಾಚಿನ ಕಲೆ ಯಲ್ಲಿ ಒಂದು. ಇವತ್ತಿಗೂ ಈ ಕಲೆಯ ಬೇಡಿಕೆ ದೇಶ-ವಿದೇಶದಲ್ಲಿ ತುಂಬಾ ಇದೆ. ಇತ್ತೀಚಿನ ಕಾಮ್ಮೊನ್ ವೆಅಲ್ಥ್ ಗೇಮ್ಸ್ ನ ಅತಿ ಪ್ರಮುಖ ಗಣ್ಯರಿಗೆ ಭಾರತ ದೇಶದಿಂದ ಬಿದರಿ ಕಲೆ ಉಡುಗೊರೆ ಕೊಡಲಾಗಿತ್ತು. ಮತ್ತೆ ಬಿದರಿ ಕಲೆಯ ಊಡುಗೋರೆ USA ಊ ಎಸ್ ನ ವೈಟ್ ಹೌಸ್ನಲ್ಲಿ ಕೂಡ ಇಡಲಾಗಿದೆ. ಇವು ಬಿದರಿ ಕಲೆಯ ಕೆಲವು ಉಪಾದಿಗಳು.ಇತ್ತೀಚೆಗೆ ಬಿದರಿಕಲೆಗೆ ಹೊಸ ಆಯಾಮಗಳನ್ನು ನೀಡಲಾಗಿದೆ. ಬುದ್ಧನ ರೂಪ ವನ್ನು ಹಿಂದಿ ಗಿಂತಲೂ ವಿಭಿನ್ನವಾಗಿ ಗ್ರಹಿಸಿದ ಶಿಲ್ಪಗಳು ಸಮಕಾಲೀನ ಕುಶಲಿಗಳಿಂದ ಮೂಡಿ ಬಂದಿವೆ.
ಪ್ರವಾಸೋದ್ಯಮ
ಕರ್ನಾಟಕದಲ್ಲಿ ನೈಸರ್ಗಿಕ ಸೌಂದರ್ಯಯುಕ್ತ ಪ್ರದೇಶಗಳು, ಹಾಗು ಐತಿಹಾಸಿಕ ಸ್ಥಳಗಳು ಪ್ರವಾಸೋದ್ಯಮವನ್ನು ಒದಗಿಸುತ್ತವೆ.
- ಶಿವನಸಮುದ್ರದ ಭರಚುಕ್ಕಿ ಜಲಪಾತ
- ೮೫೭ ಅಡಿಗಳ ಕೆಳಗೆ ಧುಮ್ಮಿಕ್ಕುವ ಜೋಗದ ಜಲಪಾತ
- ಶ್ರವಣಬೆಳಗೊಳದ ದೊಡ್ಡ ಬೆಟ್ಟದ ಭೂ ದೃಶ್ಯ
ಕನ್ನಡ ರಾಜ್ಯೋತ್ಸವದ ಕೆಲವು ಫೋಟೋಗಳು
ಜನವರಿ 26, 2023 ಗಣರಾಜ್ಯೋತ್ಸವಜನವರಿ 26, 2023 ಗಣರಾಜ್ಯೋತ್ಸವ
ಜನವರಿ 26, 2023 ಗಣರಾಜ್ಯೋತ್ಸವ
ಫೆಬ್ರವರಿ 04, 2023 ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್
ಫೆಬ್ರವರಿ 04, 2023 ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್
ಫೆಬ್ರವರಿ 04, 2023 ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್
ಫೆಬ್ರವರಿ 04, 2023 ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್
ಫೆಬ್ರವರಿ 04, 2023 ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್
ಫೆಬ್ರವರಿ 04, 2023 ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್
ಫೆಬ್ರವರಿ 04, 2023 ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್
ಫೆಬ್ರವರಿ 04, 2023 ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್
ಫೆಬ್ರವರಿ 04, 2023 ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್
ಚಂದ್ರಶೇಖರ .ಆರ್ .ಎಸ್ - ಬಿಇ, ಎಂಬಿಎ
ಕನ್ನಡ ಮತ್ತು ಪರಿಸರ ಪ್ರೇಮಿ , ರಾಜ್ಯ ಪ್ರಶಸ್ತಿ ವಿಜೇತ
ನಾನು ಡಿಜಿಟಲೀಕರಣದ ಮುಖ್ಯಸ್ಥನಾಗಿ ಸೀಮೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು 8 ವರ್ಷಗಳ ಕಾಲ ಅಮೇರಿಕಾ ಮತ್ತು ಜರ್ಮನಿಯಲ್ಲಿ ಕೆಲಸ ಮಾಡಿದ್ದೇನೆ ಮತ್ತು ಕನ್ನಡ ರಾಜ್ಯೋತ್ಸವದ ಮೂಲಕ ಹೊರ ದೇಶಗಳಲ್ಲಿ ಕನ್ನಡವನ್ನು ಬೆಳೆಸುತ್ತಿದ್ದೆ.
ಕನ್ನಡ ನಾಡು ಗಂಧದ ಬೀಡು ಎಂಬ ಹೊಸ ಕಾರ್ಯಕ್ರಮವನ್ನು ಆರಂಭಿಸಿದ್ದೇನೆ. ಶಾಲೆ, ಆಸ್ಪತ್ರೆ, ಸರ್ಕಾರಿ ಕಚೇರಿಗಳಲ್ಲಿ ಗಂಧದ ಗಿಡಗಳನ್ನು ನೆಟ್ಟಿದ್ದೇನೆ. ನಾನು 5 ವರ್ಷಗಳಲ್ಲಿ 1,00,000 ಶ್ರೀಗಂಧದ ಮರಗಳನ್ನು ನೆಡಲು ಯೋಜಿಸುತ್ತಿದ್ದೇನೆ.
ನಾನು ಸರ್ಕಾರಿ ಶಾಲಾ ಮಕ್ಕಳಿಗೆ ಶುಲ್ಕ, ಪುಸ್ತಕ, ಪೆನ್ಸಿಲ್ ಮತ್ತು ಪೆನ್ನು ಸಹಾಯ ಮಾಡುತ್ತಿದ್ದೇನೆ.
ನಾನು ಕೆಲವು ಕವನಗಳನ್ನು ಮತ್ತು ಲೇಖನಗಳನ್ನು ಬರೆದಿದ್ದೇನೆ. ನಾನು ಅಮೇರಿಕಾ, ಜರ್ಮನಿ ಮತ್ತು ಭಾರತದಲ್ಲಿ 30 ಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಹೊಂದಿದ್ದೇನೆ. ನಾನು 2013 ಮತ್ತು 2014 ರಲ್ಲಿ ವರ್ಷದ ಸಂಶೋಧಕ ಪ್ರಶಸ್ತಿಯನ್ನು ಪಡೆದಿದ್ದೇನೆ. ವಿಜ್ಞಾನ ಪ್ರದರ್ಶನಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ಮತ್ತು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದೇನೆ.
2023 ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವತಿಯಿಂದ ಸನ್ಮಾನಿಸಲಾಯಿತು.


















.jpg)





Comments
Post a Comment